Sunday, 16 February 2020

ಪಾರಿಜಾತ

ಪಾರಿಜಾತವು ಕರೆದಿತು ನನ್ನ
ನಸುನಗುತ ಮುಂಜಾವಿನಲಿ
ನೀನು ಅದರ ಗೆಳತಿ.
ಹಸಿರು ಹುಲ್ಲಿನ ಮೇಲೆ
ರಂಗೋಲಿ ಇಟ್ಟಂತೆ
ಹೊಸ ಬದುಕಿಗೆ
ಆಸೆಯ ಚಿಲುಮೆ
ನೀನು ಅದರ ಗೆಳತಿ
ಹೂವಿಂದ ಹೂವಿಗೆ
ಹಾರುವ ಚಿಟ್ಟೆ
ನನ್ನಂತೆ ಪ್ರೀತಿಯ
ಹುಡುಕುತಿದೆ.
ನೀನು ಅದರ ಗೆಳತಿ
ಅರಳಿದ ಹೂವಿಗೆ
ಹೃದಯವು ಹಾಡಿದೆ
ನೆನಪಿನ ಪರಿಮಳಕೆ
ನೆನಪಿನ ಪರಿಮಳಕೆ
ನೀನು ಅದರ ಗೆಳತಿ
ಪಾರಿಜಾತವು ಕರೆದಿತು ನನ್ನ
ನಸುನಗುತ ಮುಂಜಾವಿನಲಿ
ನೀನು ಅದರ ಗೆಳತಿ.
-ಕಿರಣ
                                                                        ಚಿತ್ರಕೃಪೆ : ಅಂತರ್ಜಾಲ 

Thursday, 23 June 2016

ಮಳೆಯ ಹನಿ..

ಮನದಿ ಮೂಡುವ ಭಾವನೆಗಳು
ಮಳೆಯ ಹನಿಯಂತೆ
ನಿಲ್ಲದೆ ಸುರಿಯುವುದು
ನೆನಪಿನೊಡನೆ
ಕನಸಿನೊಡನೆ
ಎಷ್ಟು ನೆಂದರೂ
ನಡುಗುವುದಿಲ್ಲ ಮನವು
ನಿನ್ನ ನೆನಪಿನೊಡನೆ
ತುಂತುರು ಭಾವಗಳ ಕನಸಿನೊಡನೆ
-ಕಿರಣ
                                                    ಚಿತ್ರಕೃಪೆ : ಅಂತರ್ಜಾಲ

Wednesday, 22 June 2016

ನಿನ್ನ ನೆನಪು

ಹುಣ್ಣಿಮೆಯ ರಾತ್ರಿಯಲಿ
ತೆಂಗಿನ ಗರಿಗಳ ನಡುವೆ
ಚಂದಿರನ ನೋಡುತಲಿ
ದೂರ ತೀರದ ಯಾನ
ಕನಸಿನ ಕಡಲೊಳು
ಅಲೆಯಾಗಿ ತಂಗಾಳಿ
ಮತ್ತೆ ಕಾಡಿದೆ ನಿನ್ನ ನೆನಪು
ಚಂದಿರನು ನಾಚುತಲಿ
ಮೋಡದಲಿ ಮರೆಯಾಗಿ
ನಿನ್ನ ಆ ನಗುವ ನೋಡಿ
ಮತ್ತೆ ಆ ಹಳೆಯ ಹಾಡು
ಮನವೆಕೋ ಜಾರುತಿದೆ
ನೆನಪಿನೆಡೆಗೆ...
ಮತ್ತೆ ಕಾಡಿದೆ ನಿನ್ನ ನೆನಪು
-ಕಿರಣ
                ಚಿತ್ರಕೃಪೆ : ಅಂತರ್ಜಾಲ 

ಒಮ್ಮೆ ಮಳೆ ಬರಬಾರದೆ

ನೀಲಿ ಆಕಾಶದಲಿ
ಕಪ್ಪನೆಯ ಮೋಡ
ಮಳೆ ಬರಬಾರದೆ ಎಂದು
ಕಾಯುತಿದೆ ಮನ
ಒಮ್ಮೆ ನೆನೆವ ಆಸೆ
ನನ್ನೆಲ್ಲಾ ನೋವ ಬದಿಗೊತ್ತಿ
ಒಮ್ಮೆ ನಗುವ ಆಸೆ
ಹೂ ನಗುವಂತೆ
ಒಮ್ಮೆ ಮಳೆ ಬರಬಾರದೆ
ಒಮ್ಮೆ ಮಳೆ ಬರಬಾರದೆ

ಹಸಿರು ಹಸಿರಾಗಿರದು
ಬಾರದಿದ್ದರೆ ಮಳೆಯು
ಉಸಿರು ಉಸಿರೇ ಇರದು
ಬಾರದಿದ್ದರೆ ಮಳೆಯು
ಒಮ್ಮೆ ನೆನೆವ ಆಸೆ
ಮಳೆಯಲಿ ಕುಣಿಯು ಆಸೆ
ಒಮ್ಮೆ ಮಳೆ ಬರಬಾರದೆ
ಒಮ್ಮೆ ಮಳೆ ಬರಬಾರದೆ

ಬರವಸೆಯಲಿ ಸೂರ್ಯೋದಯ
ಅನುಭವಗಳ ಜೊತೆಗೆ ಚಂದ್ರೋದಯ
ದಿನವು ಹುಡುಕುತಾ ಹೊಸ ಚಿಗುರ
ದಿನವು ಹುಡುಕುತಾ ಹೊಸ ಬದುಕ
ಕಾತುರದಿ ಕಾಯುತಿದೆ ಮನ
ಒಮ್ಮೆ ಆ ಕಾಮನಬಿಲ್ಲ.
ಒಮ್ಮೆ ಮಳೆ ಬರಬಾರದೆ
ಒಮ್ಮೆ ಮಳೆ ಬರಬಾರದೆ
-ಕಿರಣ
                      ಚಿತ್ರಕೃಪೆ : ಅಂತರ್ಜಾಲ

ಹಳೆಯ ಹಾಡು

ಮನವೇಕೊ ಹಾಡುತಿದೆ
ಆ ಹಳೆಯ ಹಾಡು
ತುಂತುರು ಮಳೆ ಹನಿ
ಅದಕೆ ಹಿಮ್ಮೇಳ
ಮನಸಿನ ಭಾವಗಳು
ಮೌನದಲಿ ಮರೆಯಾಗಿ
ನೀನಿರುವೆ ಜೊತೆಯಲಿ
ಎಂದು ಕನವರಿಸುತಿದೆ
ಪ್ರೀತಿಯ ಹಂಬಲಿಕೆಗೆ
ಪ್ರೀತಿಯ ಹಂಬಲಿಕೆಗೆ
ಮನವೇಕೊ ಹಾಡುತಿದೆ
ಆ ಹಳೆಯ ಹಾಡು...
ಮತ್ತೆ ವಾಸ್ತವ
ಆ ಆಶಾವಾದ
ನಿನಗಾಗಿ ನನ್ನ ಮನ
ನಿನಗಾಗಿ ನನ್ನ ಮನ
-ಕಿರಣ
                               ಚಿತ್ರಕೃಪೆ : ಅಂತರ್ಜಾಲ 

ಸಂಭಂದ

ಎಲ್ಲಿಯೋ ಹುಟ್ಟು ಎಲ್ಲಿಯೋ ಸಾವು
ಎಲ್ಲಿಯೋ ಅಳು ಎಲ್ಲಿಯೋ ನಗು
ಅರಿಯಲಾಗದ ಸಂಭಂದ
ಸೇರಿದರಲ್ಲವೇ ಜೀವನ.
ಎಲ್ಲಿಯೋ ಮಳೆ ಎಲ್ಲಿಯೋ ಬೆಳೆ
ಎಲ್ಲಿಯೋ ರೈತ ಎಲ್ಲಿಯೋ ಭೂಮಿ
ಅರಿಯಲಾಗದ ಸಂಭಂದ
ಸೇರಿದರಲ್ಲವೇ ಬದುಕು.
ಎಲ್ಲಿಯೋ ನೀನು ಎಲ್ಲಿಯೋ ನಾನು
ಎಲ್ಲಿಯೋ ಕನಸು ಎಲ್ಲಿಯೋ ಮನಸ್ಸು
ಅರಿಯಲಾಗದ ಸಂಭಂದ
ಸೇರಿದರಲ್ಲವೇ ಪ್ರೀತಿ.
-ಕಿರಣ

Monday, 20 June 2016

ನಗು

ಕಾಣದ ಉಸಿರಿನಲ್ಲಿ
ಕಾಣುವ ಜೀವವಿದೆ.
ಕಾಣುವ ಕಣ್ಣುಗಳಲ್ಲಿ
ಕಾಣದ ಪ್ರೀತಿ ಇದೆ.
ಸೂರ್ಯನ ನಗುವಿನಲ್ಲಿ
ಹೂವಿನ ನಗುವು ಇದೆ.
ನಿನ್ನಯ ನಗುವಿನಲ್ಲಿ
ನನ್ನಯ ನಗುವು ಇದೆ.
-ಕಿರಣ