Saturday, 11 June 2016

ಒಲವೇ ನೀನು ಒಂದು ಕವಿತೆ

ನಿನ್ನ ನೋಡಿ ಕಲಿತಿರ ಬಹುದೆ ಹೂವು
ಮನ ಬಿಚ್ಚಿ ನಗಲು
ನಿನ್ನ ನೋಡಿ ಕಲಿತಿರ ಬಹುದೆ ಭೂವಿಯು
ಹಸಿರಾ ಸೀರೆಯ ಒಡಲು
ನೆನಪಿನ ಹಾಯಿ ದೋಣಿ
ತೇಲುತಿದೆ ಕನಸಿನ ಮೇಲೆ
ನೆನಪಿನಾಳದ ಪದಗಳ ಸಾಲು
ಗೀಚುತಿರುವೆ ಮನದ ಮೇಲೆ
ಒಲವೇ ನೀನು ಒಂದು ಕವಿತೆ
ಹೃದಯದೊಳಗಿನ ಒಂದು ಕನಸೇ
ನಿನ್ನ ನೋಡಿ ಕಲಿತಿರ ಬಹುದೆ ಹೂವು
ಮನ ಬಿಚ್ಚಿ ನಗಲು
ನಿನ್ನ ನೋಡಿ ಕಲಿತಿರ ಬಹುದೆ ಕವಿಯು
ಬರೆಯಲೊಂದು ಸುಂದರ ಕವಿತೆ..
-ಕಿರಣ

No comments:

Post a Comment