Saturday 11 June 2016

ಕಾಗದದ ದೋಣಿ

ಬದುಕು ಒಂದು ಕಾಗದದ ದೋಣಿ
ಸಾಗುತ್ತಿದೆ ಕನಸುಗಳ ಜೊತೆಗೆ
ಸಿಕ್ಕ ಸಿಕ್ಕ ಕಡೆಗೆ ತನ್ನದೇ ದಾರಿಯಲ್ಲಿ.
ಕೆಲವೊಮ್ಮೆ ಬಿರುಗಾಳಿ,
ಕೆಲವೊಮ್ಮೆ ತಂಗಾಳಿ,
ಆದರು ಹುಡುಕುತಿದೆ ಪ್ರೀತಿಯೆಂಬ ದಡವನ್ನು
ಸಿಗದೇ ಹೋಗದಿರು ಪ್ರೀತಿಯೆ ನೀನು. .
ಹರಿದು ಹೋಗುವ ಮುನ್ನ ಕಾಗದದ ದೋಣಿ.
ಮುಳುಗುವ ಮುನ್ನ ಬದುಕು..
-ಕಿರಣ
                                            ಚಿತ್ರಕೃಪೆ : ಅಂತರ್ಜಾಲ 

No comments:

Post a Comment